Jawaharlal Nehru Centre for Advanced Scientific Research - An Autonomous Institution

Kannada Rajyothsava -2026

Kannada Rajyothsava -2026 was celebrated at the Centre on Tuesday 3rd Nov 2026. Prof. K.S. Narayan, In-charge President hoisted the Kannada flag and paid floral tributes to Goddess Bhuvaneshwari. The students and staff of the Centre sang Kannada songs.

ಇಂದು ನಮ್ಮ ಸಂಸ್ಥೆಯಲ್ಲಿ  ಕನ್ನಡ ರಾಜ್ಯೋತ್ಸವ - ೨೦೨೬  ನ್ನು ಆಡಳಿತ ಕಟ್ಟಡದ ಮುಂಬಾಗದಲ್ಲಿ ಹೆಮ್ಮೆ ಹಾಗು ಸಡಗರದಿಂದ ಆಚರಿಸಲಾಯಿತು

ಸಂಸ್ಥೆಯ ಪ್ರಭಾರ ಅಧ್ಯಕ್ಷರಾದ ಪ್ರೊಫೆಸರ್ K.S. ನಾರಾಯಣ್  ರವರು ಕನ್ನಡ ಧ್ವಜಾರೋಹಣ  ನೆರೆವೇರಿಸಿ ತಾಯಿ ಭುವನೇಶ್ವರಿಗೆ  ಪುಷ್ಪಾರ್ಚನೆ  ಮಾಡಿ ಗೌರವ ಹಾಗು ವಂದನೆ ಸಲ್ಲಿಸಿದರು. ಅವರಿಗೆ ಕೃತಜ್ಞತೆಗಳು

ಈ  ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚ ಕನ್ನಡದಲ್ಲಿ  ಸುಲಲಿತವಾಗಿ ನಾಡಿನ ಇತಿಹಾಸ , ನುಡಿ , ಜಲ ,ಕವಿಪುಂಗವರ ಸ್ಮರಣೆ , ರಾಜ್ಯೋತ್ಸವದ ಮಹತ್ವ ತಿಳಿಸಿಕೊಟ್ಟು ಕಾರ್ಯಕ್ರಮಕ್ಕೆ ಮೆರುಗು ನೀಡಿದ ಸಂಸ್ಥೆಯ ಸಂಶೋಧನಾ  ವಿದ್ಯಾರ್ಥಿನಿ ಕುಮಾರಿ ಭೂಮಿಕಾಗೆ ಅಭಿನಂದನೆಗಳು .

ಈ ಕಾರ್ಯಕ್ರಮದಲ್ಲಿ ಕನ್ನಡ ರಾಜ ಪರಂಪರೆಯ ನಾಡಗೀತೆ ,ಕವಿತೆಯ ವಾಚನ   ಹಾಗು ತಮ್ಮ ಸುಮಧುರ ಕಂಠದಿಂದ   ಇಂಪಾದ  ಕನ್ನಡ ಗೀತೆಗಳನ್ನು ಸೊಗಸಾಗಿ ಹಾಡಿ  ನಮ್ಮೆಲ್ಲರನ್ನೂ ರಂಜಿಸಿದ ಸಂಸ್ಥೆಯ  ವಿದ್ಯಾರ್ಥಿನಿಯರಾದ  ಕುಮಾರಿ ಬಿಂಧು ,ಅದಿತಿ ,ವಿಜೇತ ,ಭವ್ಯಶ್ರೀ ,ವಿದ್ಯಾರ್ಥಿಗಳಾದ ಶ್ರೀ ಸಾಯಿ ಸುಬ್ರಮನೀ , ಶ್ರೀ ಅತುಲ್ ಮತ್ತು ನಾಡಗೀತೆಯಯನ್ನು ಸಿರಿ ಕಂಠದಲ್ಲಿ ಪ್ರಸ್ತುತ ಪಡಿಸಿದ ಭದ್ರತಾ ಸಿಬ್ಬಂದಿ ಶ್ರೀ ಲಿಂಗರಾಜು ಹಾಗು ವಿಶೇಷ  ಪ್ರತಿಭೆಯ  ಶ್ರೀ ಬಸವರಾಜ್ ರವರಿಗೆ ಸಂಸ್ಥೆಯ ಪರವಾಗಿ ಕೃತಜ್ಞತೆಗಳು .

Event Date :
Event End Date :
Place of the event :
JNCASR
Organised by :
Administration
Other Venue :
Admin Foyer
Sponsored Event :
JNCASR sponsored
High tea time :
-
Organising Team :
Administration
Submitted By nanda on 03/11/2026